ಪಶ್ಚಿಮಬಂಗಾಲದ ಬರ್ದವಾನ್ ಜಿಲ್ಲೆಯ, ದಾಮೋದರ್ ನದೀಕಣಿವೆಯಲ್ಲಿರುವ ಒಂದು ನಗರ. ರಾಣಿಗಂಜ್ ಕಲ್ಲಿದ್ದಲು ಗಣಿಗಳ ಹತ್ತಿರ, ಪೂರ್ವರೈಲ್ವೆ ಯಲ್ಲಿ, ಕೋಲ್ಕತದಿಂದ 212 ಕಿಮೀ ದೂರದಲ್ಲಿದೆ. ವಿಸ್ತೀರ್ಣ10.4 ಚ.ಕಿಮೀ. ಜನಸಂಖ್ಯೆ 4,75,439 (2001). ಗ್ರಾಂಡ್ ಟ್ರಂಕ್ ರಸ್ತೆ ನಗರದ ಪೂರ್ವದಿಂದ ಪಶ್ಚಿಮಕ್ಕೆ ಹಾದುಹೋಗುತ್ತದೆ. ಇದೊಂದು ಕೈಗಾರಿಕಾನಗರ, ಕಲ್ಲಿದ್ದಲ್ಲಿನ ಮಾರಾಟ ಕೇಂದ್ರ. ಮುಖ್ಯರೈಲ್ವೆ ನಿಲ್ದಾಣ. ಇಲ್ಲಿ ಇದು ರೈಲ್ವೆ ಕಾಲೊನಿ ಮತ್ತು ಕಾರ್ಯಾಗಾರಗಳಿವೆ. ಉಪನಗರವಾದ ಜಿಕೆ ನಗರದಲ್ಲಿ ದೊಡ್ಡ ಅಲ್ಯೂಮಿನಿಯಂ ಕಾರ್ಖಾನೆ ಇದೆ. ದೊಡ್ಡ ದೊಡ್ಡ ಕಬ್ಬಿಣದ ಕುಲುಮೆಗಳಿವೆ. ರಾಸಾಯನಿಕ ಹಾಗೂ ತಾಂತ್ರಿಕ ವಸ್ತುಗಳನ್ನು ಉತ್ಪಾದಿಸುತ್ತಾರೆ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ